ಮೂರಕ್ಕೆ ಮುಕ್ತಾಯ :
ನಾನು ಕಾಯ್ಸೋದು ..ನೀವು ಕಾಯೋದು..
ನಾನು ಬರಿಯೋದು ನೀವು ಓದದೆ ಇರೋದು ..ನಿಜವಾಗಾಲು ಹೇಳ್ಳ ..ನೀವು ಓದಿದರೆ ಓದಿ ಬಿಟ್ಟರೆ ಬಿಡಿ ನಾನು ಮಾತ್ರ ನಿಮ್ಮ ನು ಕಾಯಿಸಿನೆ ಬರಿಯೋದು ..ಯಾವದಕ್ಕಾದರು ನಾವು ಕಾಯಲೇಬೇಕು ..ಕೆಲವರು ಒಳ್ಳೆಯ ಸಮಯ ಬಂದೇ ಬರತ್ತೆ ಅಂತ ಕಾದರೆ ..ಇನ್ನು ಕೆಲವರು ಕೆಟ್ಟ ಕಾಲ ಕಳೆಯೊದು ಯಾವಾಗ ಅಂತ ಕಾಯ್ತಾರೆ ..ನಮ್ಮ ಐಟಿ ಹುಡುಗರು ಬೆಂಗ್ಳೂರು ಟ್ರಾಫಿಕ್ ಜಾಮ್ ಸಮಸ್ಯಗೆ ಯಾವಾಗ ಕೊನೆ ಅಂತ ಕಾಯ್ತಾ ಇದಾರೆ ...ನನ್ನ ಕೇಳಿದ್ರೆ ಬೆಂಗಳೂರಿಗೆ ನೆ ಅವಮಾನ ಇಲ್ಲಿ ಟ್ರಾಫಿಕ್ ಗೆ ಒಂದು ಪರಿಹಾರ ಸಿಕ್ಕರೆ. ನಾ ಹೇಳ್ಳ ನೀವು ಈ ಊರನ್ನ ಬಿಟ್ರು ...ಟ್ರಾಫಿಕ್ ಅನ್ನೋ ಪೆಡಂಬೂತ ಈ ಊರನ್ನು ಬಿಡೋಲ್ಲ ..ನಾನಂತು ಯಾವಾಗ ಈ ಭೂತದಿಂದ ತಪ್ಪಿಸ್ಕೊಂಡು ನಮ್ಮ ಊರು ಕಾಣೊ ತನಕ ಓಡಿ ಹೋಗ್ತಿನೊ ಗೊತ್ತಿಲ್ಲ...ಈ ವಾಸ್ತವ ಗೊತ್ತಿರೊರಿಗೆ ಗೊತ್ತು... ಇಲ್ಲದೇ ಇರೊರಿಗೆ ಗೊತ್ತಾಗೊದು ಬೇಡ. ನಾವು ನಮ್ಮ ಕನ್ನಡ ಮೇಷ್ಟ್ರು ಪಾಠ ಮಾಡೋದು ಯಾವಾಗ ಮುಗಿಸ್ತಾರೆ ಅಂತ ಕಾಯ್ತಿದ್ವಿ. ಒಂದೇ ಪಾಠವನ್ನ ಮೂರು ಬಾರಿ ಮಾಡಿ ಬೋರ್ ಹೊಡಿಸ್ತಾ ಇದ್ದರು ಅದಕ್ಕೆ ಅವರಿಗೆ ಬೊರವೆಲ್ ಮಾಸ್ಟರ್ ಅಂತ ನಾಮಕರಣ ಮಾಡಿದ್ದು ಉಂಟು.ಮೂರು ಅನ್ನೊ ಸಂಖ್ಯೆ ಗೆ ಏನೊ ಒಂತರಾ ಶಕ್ತಿ ಇರಬಹುದಾ ಅಂತ ನಂಗೇನು ..ಎಲ್ಲರಿಗು ಅನುಭವ ಹಾಗಿರಬಹುದು ...ಆ ಮುಕ್ಕಣ್ಣ ನ ಮೂರನೇ ಕಣ್ಣು ಬಿಟ್ಟಿರೊದನ್ನ ನಾನು ನೋಡಿಲ್ಲ ಆದರೆ ನಾನು ನನ್ನ ಪರಿಚಯ ಮುಗಿಸದೇ ಹೋದರೆ ನಮ್ಮ ಹುಡುಗರೇ ಆ ಕಣ್ಣು ತೆರೆದರು ಆಶ್ಚರ್ಯ ಇಲ್ಲ ..ಯಾಕೆಂದರೆ ನಾವೆಲ್ಲ ಆ ಶಿವ ಭಕ್ತರಲ್ಲವೇ ಅವನಿಗೆ ಇರೋ ಕೋಪ ತಾಪಗಳು ಅವನ ಭಕ್ತರಿಗೆ ಇರೊದರಲ್ಲಿ ಎರಡು ಮಾತಿಲ್ಲ.
ಮೂರಕ್ಕೆ ಮುಕ್ತಾಯ ಅನ್ನೊ ನಂಬಿಕೆ ನಮ್ಮ ಹಲವರಲ್ಲಿ ಬೇರೊರಿದೆ.ಏನಿಕ್ಕೆ ಇರಬಹುದು ಅಂತ ನನ್ನ ಕೇಳಿದ್ರೆ ಹೇಳೋದು ನನಗೆ ತಿಳಿದಿರೊ ಹಾಗೆ ಇರೋದು ಮೂರು ಲೋಕ( ಪಾತಳಲೊಕ, ಭೂಲೋಕ, ದೇವಲೋಕ) ಮೂವತ್ತ ಮೂರು ಕೋಟಿ ದೇವತೆಗಳು.
ಕೊನೆಯದಾಗಿ ನನ್ನ ಈ ಕಿರು ಪರಿಚಯಾನ ಮುಗಿಸಲಬೆಕು..ನಾನೊಬ್ಬ ಮೆಕ್ಯಾನಿಕಲ್ ಇಂಜಿನಿಯರ್ ...ಓದಿದ್ದು ಬಸವನಗುಡಿಯ ದೊಡ್ಡ ಬಸವನ ಹತ್ತಿರ ಇರುವ ಬಿ.ಎಂ. ಎಸ್ ಕಾಲೇಜಿನಲ್ಲಿ. ಇದ್ದಿದ್ದು ನಮ್ಮ ಬೆಂಗಳೂರಿನ ರೈಲ್ವೆ ನಿಲ್ದಾಣ ಪಕ್ಕನೆ ಇರೊ ನಮ್ಮ ಶ್ರೀ ರಾವ್ ಬಹದ್ದೂರ್ ಗುಬ್ಬಿ ತೋಟದಪ್ಪ ಛತ್ರದಲ್ಲಿ. ನೂರಾರು ವರುಷಗಳಿಂದ ಉಚಿತವಾಗಿ ವಸತಿ ಕಲ್ಪಿಸುತ್ತಿರವ ವಿದ್ಯಾರ್ಥಿನಿಲಯ.ನಾನು ಬಿ.ಎಂ.ಎಸ್ ಕಾಲೇಜಿನ ವಿದ್ಯಾರ್ಥಿ ಅಂತ ಹೇಳಿಕೊಳ್ಳೊದಕಿಂತ ತೋಟದಪ್ಪ ಹಾಸ್ಟೆಲ್ ನ ವಿದ್ಯಾರ್ಥಿ ಅಂತ ಹೇಳೊದು ಒಂದು ಹೆಮ್ಮೆಯ ವಿಚಾರ. ಯಾಕೆ ಅಂತ ಕೇಳ್ತಿರಾ ...ಆದರೆ ಅದನ್ನ ಹೇಳೊಕೆ ಒಂದು ಎರಡು ವಾಕ್ಯಗಳು ಸಾಕಾಗೊದಿಲ್ಲ ಅನ್ನೋದು ನನ್ನ ಭಾವನೆ.
ತದನಂತರ ಮರೆತರೂ ಮರೆಯಲಾಗದ ಎರಡು ವರುಷ ಮದ್ರಾಸಿನ ಐ.ಐ.ಟಿ ಯಲ್ಲಿ ಮಾಸ್ಟರ್ ಆಫ್ ಟೆಕ್ನಾಲಜಿ. ಅದೇನು ಮರೆತರು ಮರೆಯಲಾಗದ ನೆನಪು ಅಂತ ಕೇಳ್ತಿದಿರಾ ನನ್ನ ಮುಂಬರುವ ಕೃತಿ ಗಳಲ್ಲಿ ಒಂದಾದ "ಜಿಂಕೆಯ ಜೊತೆ ಜೊತಗೆೆ" ಯನ್ನು ಓದಿ ನಿಮಗೆ ಅರ್ಥ ಹಾಗಬಹುದು ಅದೇನಿರಬಹುದು ಮರೆಯಲಾಗದ ನೆನಪು ಅಂತ.
No comments:
Post a Comment