ದೀಪದಿಂದ ದೀಪವ ಹಚ್ಚಬೇಕು ಮಾನವ...
ದೀಪದಿಂದ ಪಠಾಕಿಯನ್ನಲ್ಲ ಓ ಮಾನವ ..
ಆ ದೇವರ ಸ್ರುಷ್ಟಿಯ ಎಲ್ಲಾ ಜೀವಿಗಳಿಗೂ ಈ ಭೂಮಿಯ ಮೇಲೆ ಮಾನವನಿಗೆ ಎಷ್ಟು ಹಕ್ಕು ಇದಿಯೊ ಅಷ್ಟೇ ಹಕ್ಕಿದೆ ..ಆದರೆ ವಾಸ್ತವ ನೇ ಬೇರೆಯಾಗಿದೆ ..ಯಾರು ಹೆಚ್ಚು ಬಲಿಷ್ಟರೋ ಅವರಿಗಷ್ಟೇ ಈ ಭೂಮಿಯ ಮೇಲೆ ಜಾಗ. ಅದೇ ತರಹ ಮಾನವ ಬಲಿಷ್ಟನಾದ್ದರಿಂದ ಅವನು ಇನ್ನೊಂದು ಜೀವಿಯ ಲೆಕ್ಕಕ್ಕೆ ಇಡದಂತಹ ಪರಿಸ್ಥಿತಿಯಿದೆ... ಅನ್ಯ ಜೀವಿಗಳು ಬದುಕಿದರೆಷ್ಟು ಸತ್ತರೆಷ್ಟು ...ಈ ಕಾನೂನುಗಳನ್ನು ಮಾಡಿಕೊಂಡವರು ಮಾನವರೆಂಬುದನ್ನು ಮರೆಯಬಾರದು ..ಕೆಲವರಂತು ನಾವು ಏನನ್ನು ಬೆಕಾದರು ತಿನ್ನುತ್ತವೆ ಕೇಳೊಕೆ ನೀವ್ಯಾರು ಅಂತ ಹೇಳಿದ್ದು ಉಂಟು. ಹೌದು ನಮಗೆ ಕೇಳುವುದಕ್ಕೆ ಹಕ್ಕಿಲ್ಲ ಅಂದೆ ಇಟ್ಟು ಕೋಳ್ಳೊಣ ..ನಾಳೆ ಮಾನವನನ್ನು ತಿನ್ನುವ ಂತೊರು ಬಂದರೆ ಹಾಗ ಅವರನ್ನು ಯಾರು ಕೇಳದೇ ಸಮ್ಮನೆ ಇರ್ತಿರಾ ..ಕೇಳೊದು ಇರಲಿ ಮರುಕ್ಷಣದಲ್ಲಿ ಅವರ ಬಲಿಯಾಗಿರತ್ತದೆ ..ಮಾನವನಿಗಷ್ಟೆ favor ಹಾಗಿರೊ ಈ ಕಾನೂನಿಗೆ ನನ್ನ ಧಿಕ್ಕಾರ ...
ಸಕಲ ಪ್ರಾಣಿಗಳಲ್ಲಿ ದಯೆಯಿರಲಿ ...
ದಯವೇ ನಮ್ಮ ಧರ್ಮದ ಮೂಲ ಎನ್ನುವುದನ್ನ ನಾವು ಮರೆಯಬಾರದು.
ಎಲ್ಲಾ ಪ್ರಾಣಿಗಳ ಮೇಲೆ ದಯೆಯ ಮಾತನ್ನು ಕೊಂಚ ಸಮಯ ಬದಿಗೊತ್ತಿ.
ನಮಗೆ ಹುಟ್ಟಿದ ದಿನದಿಂದ ಸಾಯುವವರೆಗೂ ಅನೂಕೂಲವಾಗಿರುವ ನಮ್ಮ ತಾಯಿಗು ಮಿಗಿಲಾದ ನಮ್ಮ ಗೊಮಾತೆಯ ರಕ್ಷಣೆ ಯೇ ದೊಡ್ಡ ಸಮಸ್ಯಯಾಗಿ ಉಲ್ಬಣಿಸಿದೆ .ಇದನ್ನು ನಾ ಹೇಳಿದರೆ ನಾನು ಕೋಮುವಾದಿ ಎಂದು ಪಟ್ಟ ಕಟ್ಟಿದರು ದೊಡ್ಡ ಆಶ್ಚರ್ಯವಿಲ್ಲ. ಇಲ್ಲಿ ತಿನ್ನುವುದಕ್ಕೆ ಯಾವ ಧರ್ಮದ ಭಯವಿಲ್ಲ ಕೇಳುವುದಕ್ಕು ಯಾರಿಗು ಹಕ್ಕಿಲ್ಲವೆಂದೆ ಇರಲಿ.ಒಂದು ಧರ್ಮದ ಜನರನ್ನು ಗುರಿಯಾಗಿಸುವುದು ತಪ್ಪಾಗುತ್ತದೆ. ಅವರ ಆಹಾರ ಪದ್ದತಿಯನ್ನು ಕೇಳುವ ಹಕ್ಕು ನಮಗಿಲ್ಲ ನಿಜ.ಯಾಕೆಂದರೆ ಯಾರು ಸಮಾಜದ ಶಾಂತಿ ಕಾಪಡಬೇಕೊ ಅವರ ಬಾಯಲ್ಲೆ ಇಂತಹ ಮಾತುಗಳು ಸಾಮಾಜಿಕವಾಗಿ ನಾವು ತಿನ್ನುತ್ತವೆ ಕೇಳೊಕೆ ನೀವ್ಯಾರು ಎಂದು ಹೊರಬಂದ ನಂತರವು ನಾವು ಯಾರನ್ನೊ ದೂರುವಂತಿಲ್ಲ.
ನಮ್ಮ ಹಿರಿಕರು ಹೇಳಿದ ಹಾಗೆ
ಕೊಂದಲ್ಲಿ ಪಾಪ ತಿಂದಲ್ಲಿ ಹೋಗುತ್ತದೆ ಅಂತ ..ಯಾಕಪ್ಪ ಈ ಮಾತು ಇಲ್ಲಿ ಬಂತು ಅಂತ ಕೇಳಬಹುದು ..
ಕಾಡಿಗೇ ಹಸುಗಳು ಹೋದಾಗ ಅದನ್ನು ಹಿಡಿದು ತಿಂದ ಹುಲಿಗೆ ಪಾಪದ ಭಯವಿಲ್ಲವೇ ಎಂದು ಕೇಳಿದಾಗ ಬಂದ ಮಾತಿದು ..ಅದಿರಲಿ ಬಿಡಿ ಎಲ್ಲ ತಿಳಿದ ಮಾನವನಿಗೆ ಆ ಭಯವಿಲ್ಲ ಎಂದಾಗ ಕಾಡುಪ್ರಾಣಿ ಗೆ ಇಲ್ಲ ಎಂಬುದರಲ್ಲಿ ಎರಡು ಮಾತಿಲ್ಲ ...
ಕೆಲವರಂತೂ ಇವರು ಹೀಗೆ ಬಾಯಿಗೆ ಬಂದ ಹಾಗೆ ಹೇಳಿದರೆಂದು ಮತ್ತೊಂದು ಜೀವಿಯ ಬಲಿಕೊಟ್ಟು ಅದನ್ನು ಇವರಿಗೆ ಕಳುಹಿಸದ್ದಾರೆ ಎಂದು ನಾನು ನ್ಯೂಸ್ ಪೇಪರಲ್ಲಿ ಓದಿದುಂಟು ...ಇಂತಹ ಬುದ್ಧಿ ಜೀವಿಗಳು ಉಂಟು ನಮ್ಮ ಸಮಾಜದಲ್ಲಿ.
ಹಸುಗಳು ಸಾಕುವುದು ಹಾಲಿಗಾಗಿ ಹೊರತು ತಿನ್ನುವುದಕ್ಕಲ್ಲ ಅನ್ನೋದು ನನ್ನ ವಾದವಷ್ಟೆ.ಅದರಲ್ಲಿಯೂ ನಮ್ಮ ಕಾನೂನಿಲ್ಲಿ ಅವಕಾಶವಿದ್ದರೆ ತಿನ್ನಿ ಅದಕ್ಕೆ ನಮ್ಮ ತಡೆಯಿಲ್ಲ. ಎಷ್ಟೇ ಹಾಗಲಿ ನಾವು ಮಾಡಿಕೊಂಡಿರೊ ಕಾನೂನಲ್ಲವೇ ಮಾನವನಿಗೆ ತಕ್ಕಂತೆ ಕಾಲ ಕಾಲಕ್ಕೆ ಹೇಗೆ ಬೇಕಾದರು ಬದಲಾಯಿಸಿ.
ಒಂದನ್ನು ನೆನಪಿನಲ್ಲಿ ಡಿ ..ಯಾವುದೆ ಪ್ರಾಣಿಯಾಗಲಿ ಹಿಂಸೆ ಮಾಡದೆ ಕೊಂದು ತಿನ್ನುವ ಕನಿಷ್ಠ ಕನಿಕರ ನಾದರು ತೊರುವ ಪ್ರವೃತ್ತಿಯನ್ನು ಬೆಳಸಿಕೊಳ್ಳಿ.ತಿನ್ನುವ ಪ್ರತಿ ಆಹಾರವು ದೇವರಿಗೆ ಸಮಾನ ಅದಕ್ಕೆ ಅನ್ನ ದೇವೊ ಸುಖೀಭವ ಎನ್ನುವುದು.
ನಮ್ಮ ಸುವರ್ಣ ಚಾನೆಲ್ ನವರು ಮಾಡಿದ ರಹಸ್ಯ ಕಾರ್ಯಾಚರಣೆ ನೋಡಿದರೆ ಗೋವುಗಳನ್ನು ಯಾವ ರೀತಿಯಲ್ಲಿ ಸಾಗಿಸ್ತಾರೆ ಅದನ್ನು ಹೇಗೆ ನಡೆದುಕೊಳ್ತಾರೆ ಅಂತ ಗೊತ್ತಾದರೆ ತಿನ್ನುವವರು ಮತ್ತು ಹಾಲುಂಡು ಮುದಿಯಾದ ಹಸುಗಳನ್ನು ಬಿಡಿಗಾಸಿಗಾಗಿ ಮಾರುವವರು ಎರಡು ಬಾರಿ ಯೋಜನೆ ಮಾಡಬೇಕು ..ಕನಿಷ್ಠ ಕನಿಕರನಾದರು ತೊರಿಸದರೆ ಸ್ವಲ್ಪ ಪುಣ್ಯವಾದರು ತಮ್ಮ ಪಾಲಿಗೆ ಬರುತ್ತದೆ. ಪಾಪ ಪುಣ್ಯಗಳ ಎಣಿಸುವ ಕಾಲವಲ್ಲವಾದರು ಮಾನವೀಯತೆ ದ್ರಷ್ಟಿಯಿಂದ ಬದಲಾಗಿ. ಅಂದಹಾಗೆ
ಮಾನವೀಯತೆ ಅನ್ನುವ ಪದ ಮಾನವಿಗಷ್ಟೇ ಸೀಮಿತ ಪ್ರಾಣಿಗಳಿಗಲ್ಲ ಯಾಕೆಂದರೆ ಪ್ರಾಣಿಗಳಗಳಿಗೆ ಪ್ರಾಣೀಯತೆ ಪ್ರ ಕೃತಿ ಸತ್ಯವಾಗಿ ಬಂದಿದೆ ಅದಕ್ಕೆ ಅವುಗಳು ಪ್ರಾಣಿಗಳು ನಾವು ಯೊಚನೆಯುಳ್ಳವರು ತುಂಬಾ ಯೋಚನೆ ಮಾಡಿ ನಮ್ಮ ಮಾನವೀಯತೆ ಯನ್ನ ದಿನೇ ದಿನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದೇವೆ. ಒಂದು ಜೀವ ಉಳಿಸಿಕೊಳ್ಳಲು ನಾವು ಎಷ್ಟೆಲ್ಲಾ ಹರಸಾಹಸ ಪಡುತ್ತಾ ಇದ್ದೇವೆ. ಅದರೆ ಅನ್ಯ ಜೀವಿಗಳೆಂದರೆ ಅಸಡ್ಡೆ. ತಮ್ಮ ಅಥವಾ ತಮ್ಮ ಸಂಭಂದಿಗಳ ಮ ಜೀವಕ್ಕೆ ಕುತ್ತು ಬಂದಾಗ ಮಾತ್ರ ಗೊತ್ತಾಗೊದು ಒಂದು ಜೀವದ ಬೆಲೆ. ಮಾನವ ಇಂದು ತನ್ನ ಜೀವ ಉಳಿಸಿಕೊಳ್ಳಲು ಕೊಟಿಗಟ್ಟಲೆ ಸುರಿಯುತ್ತಿದ್ದಾನೆ ನಾನ ರೊಗಗಳಿದೆ ತುತ್ತಾಗಿ .ಕೊಟಿ ಸುರಿದು ಉಳಿಸುವ ಪ್ರಯತ್ನ ...ಕೊಂಚ ಯೊಚಿಸಿದರೆ ಉಳಿಸುವ ಇನ್ನೊಂದು ಜೀವಿಗೆ ದಯವಿಟ್ಟು ತೋರಿ.ಒಂದು ಇರುವೆಯ ಜೀವ ತಿಂಗಳಿರಬಹುದು ಅದು ಅದಕ್ಕೆ ಹೆಚ್ಚು. ಸುಮ್ಮನೆ ಯಾವತ್ತು ಗೊತ್ತಿದ್ದು ಒಂದು ಜೀವದ ಜೊತೆ ಆಟ ಬೇಡ. ಒಂದನ್ನು ನೆನಪಿಡಿ ಜೀವಕ್ಕೆ ಎಂದೂ ಬೆಲೆಕಟ್ಟಲಾಗದು ಆದರೆ ನಮ್ಮ ಪ್ರತಿದಿನದ ಜೀವನಕ್ಕೆ ಬೆಲೆಕಟ್ಟಲೇಬೆಕು. ನಾನು ಮಾನವನೇ ..ನಾನು ಉಡುವ ತೊಡಿಗೆಯೊ ಹಾಕುವ ಚಪ್ಪಲಿಯೊ ಓಡಾಡುವ ವಾಹನವೊ ಯಾವುದಾದರೂ ಒಂದು ರೀತಿಯಲ್ಲಿ ಅನ್ಯಜೀವಿಯ ಹಿಂಸೆಗೆ ಒಂದು ರೀತಿಯಲ್ಲಿ ಕಾರಣ.ನನ್ನ ಹಾಗೆ ಎಷ್ಟೋ ಮಂದಿ ಇದ್ದಾರೆ. ಇಂದೇ ಪ್ರತಿಘ್ನೆ ಮಾಡು ಮಾನವ.. ತನ್ನ ತಿಳುವಳಿಕೆ ಬಂದಂತೆ ಯಾವ ಜೀವಿಗು ತೊಂದರೆ ಕೊಡುವುದಿಲ್ಲವೆಂದು. ಆದರೂ ಈ
ಮಾನವಿನಿಗೆಂದು ನನ್ನ ಧಿಕ್ಕಾರ.
-ಮೋಹನ್ ಹಾದೀಕೆರೆ
No comments:
Post a Comment