Saturday, 31 October 2015

ಪರಿಚಯ -ಅಂಕಣ೨

ಕಾದು ಕಾದು ಸಾಕಾಯ್ತಾ ....ಏನ್ ಮಾಡೋದು ನಾ ಮೊದಲೆ ಹೇಳಿದ ಹಾಗೆ ಸಮಯಕ್ಕೆ ಬೆಲೆ ಕೊಟ್ಟು ನನ್ನ ಪರಿಚಯನ ನಿಲ್ಲಿಸಿದ್ದೆ. 
ಕಾಯೊದು ಅಂದಕೂಡಲೆ ನಂಗೆ ನೆನಪಾಗೊ ಒಂದು ಸಣ್ಣ ಕವನ ಹೇಳ್ತಿನಿ ಕೇಳಿ...

"ಹಸಿದವನಿಗೆ ಗೊತ್ತು ಹಸಿವಿನ ಚಿಂತೆ
ಕಾಯೊನಿಗೆ ಗೊತ್ತು ಕಾಡುವ ಚಿಂತೆ
ನಮಗೇಕೆ ಬೇಕು ಈ ಚಿಂತೆಗಳ ಸಂತೆ"

ಇಲ್ಲಿ ಕವಿ ಹಸಿವು ಮತ್ತು ಕಾಯುವಿಕೆ ಯಾಕೆ ಹೋಲಿಕೆ ಮಾಡತಾ ಇದಾನೆ ಅನ್ನೋದು ನಿಮಗೆ ಗೊತ್ತಾಗಿದೆ ಅಂತ ಅಂದ್ಕೊಂಡ್ರು ಹೇಳೊದು ನನ್ನ ಧರ್ಮ.
ಹಸಿವು ಇದ್ದಾಗ ಚಿಂತೆಗಳು ಬರೊದು ಮತ್ತು ಯಾರಿಗಾದರು ಕಾಯಬೇಕಾದರೆ ಚಿಂತೆಗಳು ಕಾಡೊದು ಸಹಜ ಅಂತ ಅಷ್ಟೇ.

ನೋಡಿ ನಮ್ಮ ಹುಡುಗರಿಗೆ ಒಂದೆ ಒಂದು ಇಷ್ಟ ಹಾಗಿಲ್ಲ ಏನದು ಅಂತ ನೀವು ಕೇಳೆ ಕೆಳ್ತಿರ ಅದಕ್ಕೆ ಹೇಳಬಿಡ್ತಿನಿ. ಈ ಟಾಪಿಕ್ ನಾ ಬದಲಾಯಿಸೊದು ಅದಕ್ಕೂ ನಾನು ಮಧ್ಯ ಮಧ್ಯ ನನ್ನ ಟಾಪಿಕ್ ನ್ನ ಬದಲಾಯಿಸೊದಕ್ಕು ಒಂದು ಕಾರಣವಿದೆ. ನಾ ಬರೆಯೊ ಪ್ರತಿ ಪದಕ್ಕು ಅರ್ಥ ಕಲ್ಪಿಸಬೇಕು ಅನ್ನೋದು ನನ್ನ ವಾದ.
ಇರಲಿ ನಮ್ಮ ವಿಷಯಕ್ಕೆ ಬರೋಣ ...ಬರುವವರು ಬನ್ನಿ ಬಾರದೆ ಇರೋರು ಬೇಡ ..ಎಲ್ಲಾ ಬಂದೆ ಬರ್ತೀರಾ ಅಂತ ನನಗು ಗೊತ್ತು ...

ಪರಿಚಯ ಅನ್ನೋದು  ತುಂಬಾ ತೂಕವಿರೊ ಪದ. ಪರಿಚಯನಾ ಪರಿಚಿತ ಮಾಡಲೇಬೇಕು...

ಕಾಲೇಜಿನಲ್ಲಿ ಇದ್ದಾಗ ಅದರಲ್ಲೂ ಹುಡುಗರ ಗುಂಪು ಇದ್ದಾಗ ಯಾವುದಾದರೂ ಒಂದು ಸುಂದರ ಹುಡುಗಿಯನ್ನ ಕಂಡರೆ ಅದರಲ್ಲೊ  ನನ್ನ ಂತೊನು ಆ ಗುಂಪಲ್ಲಿದ್ರೆ ನಾನೆದರು ಹಾ ಹುಡುಗಿ ನಂಗೆ ಗೊತ್ತು ಕಣ್ರೊ ಅಂದ್ರೆ ಮುಗೀತು ..ಹಾ ಹುಡುಗೀನ ಪರಿಚಯ ಮಾಡ್ಸೊ ತನಕ ಬಿಡೋಲ್ಲ ನಮ್ಮ ಹುಡುಗರು. ಹಾಗೆ ಒಂದು ಸಲ ಸುಮ್ನೆ ಗೊತ್ತು ಅಂತ ಹೇಳಿ ನಮ್ಮ ಹುಡುಗರ ಹತ್ತಿರ ಪೇಚಾಡಿದ್ದು ಉಂಟು.  ಏನಪ್ಪ ಇವನು ಹುಡಗರ ಲೆವೆಲ್ ಕಡಿಮೆ ಮಾಡ್ತಿದಾನೆ ಅಂತ ಒಬ್ಬನೇ ಸಿಗು ಇದೆ ನಿಂಗೆ ಅಂತ ಎಷ್ಟೊ ನನ್ನ ಆತ್ಮಿಯರು ಮನಸಲ್ಲೆ ಅಂದ್ಕೊಂಡಿರಬಹುದು..
ಆದರೆ ಇದಕ್ಕೆ ಹುಡುಗೀರು ಏನು ಹೊರತಾಗಿಲ್ಲ.
ಹಾ ಕಾಲೇಜಿನ ದಿನಗಳೇ ಹಾಗೆ ..ನಮಗೆ ಗೊತ್ತಿದ್ದೊ  ಗೊತ್ತಿಲ್ದೆನೊ ಹಾಗೆ ಮಾಡೋದು ಸಹಜ.
ಪರಿಚಯ ಒಂದು ಬಿಟ್ಟು ಎಲ್ಲಾ ಮಾತಾಡ್ತಾ ಇದಾನೆ ಅಂತ ಕೆಲವರಿಗೆ ಸಿಟ್ಟು ಬಂದಿರಬೇಕು ...ಏನ್ ಮಾಡಲಿ ನಾನಿವಾಗಲೇ ನನ್ನ ಮುಂದಿನ ಪರಿಚಯನಾ ಮಾಡಿದರೆ ನನ್ನ ಬ್ಲಾಗ್ ಕಡೆ ಮತ್ತೆ ತಿರುಗೆ ಸಹ ನೊಡೊಲ್ಲ ನಮ್ಮ ಹುಡುಗರು.
ಅಂದಹಾಗೆ ನನ್ನ ಪರಿಚಯ ..ಪರಿಚಯ ಇರೊರಿಗೆ ಅಲ್ಲಾ..ಅಪರಿತರಿಗೆ ಮಾತ್ರ ನನ್ನ ಪರಿಚಯ.ಯಾಕೆಂದರೆ ನನ್ನ ಪರಿಚಯ ನಿಮಗೆಲ್ಲಾ ಇದಿಯಲ್ಲಾ...ಅಪರಿಚಿತರೇ ನನ್ನ. ಮುಂದಿನ ಪರಿಚಯ ನಿಮಗೆ ಹಾಗಬೇಕಾ ...
ಹಾಗಿದ್ದರೆ ನನ್ನ ಈ ಎರಡನೆ ಪರಿಚಯ ನ ಇಲ್ಲಿಗೆ ಮುಗಿಸೊಣವಾ ...ನನ್ನ ಮೂರನೆ ಪರಿಚಯದ ಅಂಕಣದಲ್ಲಿ ಖಂಡಿತ ಮುಕ್ತಾಯ ಮಾಡ್ತೇನೆ ಈ ನನ್ನ ಪರಿಚಯಾನ..

ಮುಗಿಸೊಣ ಅಂದರೆ ಮಾತ್ರ ಮುಗಿಸೊಣ ಇಲ್ಲಾ ಅಂದರೆ ಬೇಡ....ಏನಂತಿರಾ...????

ಅಂದಹಾಗೆ ನಾನು ನಾಳೆ ಸೂರ್ಯನ ವಾರ ಭಾನವಾರ ನಾನಂತೂ ಈ ಜನರ ಜಂಜಾಟ ಸಾಕಾಗಿ ..ಪಶ್ಚಿಮ ಘಟ್ಟದ ಮಡಿಲಿಗೆ ಹೋಗ್ತಾ ಇದೀನಿ ..ಅದರ ಬಗ್ಗೆ ನೂ ಬಂದ ನಂತರ ನನ್ನ ಅನುಭವ ನಾ ನಿಮ್ಮೆಲ್ಲರ ಹತ್ತಿರನು ಹಂಚಿಕೊಳ್ತೇನೆ.

ಸರೀ ....ಅಲ್ಲಿತನಕಾ ಕಾಯ್ತಾ ಇರೀ...
ಎಲ್ಲರಿಗೂ Happy Sunday ....

No comments:

Post a Comment