Thursday, 29 October 2015

ಪರಿಚಯ .....ಅಪರಿಚಿತರಿಗೆ ನನ್ನ ಪರಿಚಯ

ನನ್ನ ಬಗ್ಗೆ ಸಣ್ಣದಾಗಿ ಒಂದು ಪರಿಚಯ ಮಾಡಿಕೊಟ್ಟ ನಂತರ ನನ್ನ ಮುಂದಿನ ಕೃತಿಗಳನ್ನ ನಿಮ್ಮ ಮುಂದೆ ಇಡೊಣ ಅನ್ನೊದು ನನ್ನ ಆಶಯ.
ನನ್ನ ಹೆಸರು ಗೊತ್ತಿರೊರಿಗೆ ಗೊತ್ತು ಗೊತ್ತಿಲ್ಲದೇ ಇರೊರಿಗೆ ಗೊತ್ತಿಲ್ಲ ಅನ್ನೋದು ನಿಮಗು ಗೊತ್ತು. ಏನಪ ಇವನು ಪರಿಚಯದಲ್ಲೆ ಇಷ್ಟೊಂದು ಕಷ್ಟ ಕರವಾಗಿ ಪರಿಚಯ ಮಾಡ್ಕೊಳ್ತ ಇದಾನೆ ಅಂದ್ಕೊಳ್ಳಬೇಡಿ. ಅದಕ್ಕೂ ಒಂದು ಕಾರಣ ಇದೆ, ಏನೂ ಅಂತೀರಾ ನಾನು ಬರೆಯೊ ಕವನಗಳಾಗಲಿ ಕೃತಿಗಳಾಗಲಿ ಅರ್ಥವಾಗೊದು ಸ್ವಲ್ಪ ಕಷ್ಟ.ಸರಿ ವಿಷಯಕ್ಕೆ ಬರೋಣ,  ಬಂದ್ರಾ? ?
ಬಂದಿದಿರಾ ಅಂದ್ಕೊಂಡು ಮುಂದೆ ಹೋಗ್ತೀನಿ. ಏನ್ ಹೇಳ್ತಾ ಇದ್ದೆ ...ಹಾ ಪರಿಚಯ ..ನನ್ನ ಪರಿಚಯ ...ಅಪರಚಿತರಿಗೆ ನನ್ನ ಪರಿಚಯ.

ನನ್ನ ಹೆಸರು ಮೋಹನ್ ..ನಮ್ಮೂರು ಹಾದೀಕೆರೆ. ನಮ್ಮ ಊರಿಗೆ ಹೋಗುವ ಹಾದಿಯಲ್ಲಿ ಕೆರೆ ಇರೊದ್ರಿಂದ ಹಾದಿಕೆರೆ ಅಂತ ಇಟ್ಟಿದ್ದಾರೆ ನಮ್ಮ ಹಿರಿಕರು. ನಾ ಹುಟ್ಟಿದ ಊರನ್ನ ಯಾವತ್ತು ಮರಿಬಾರದು ಅಂತ ನನ್ನ ಹೆಸರು ಮುಂದೆ ನಮ್ಮೂರು ಹೆಸರು ಸೇರಿಸಿದಿನಿ. ನನ್ನ ಪೂರ್ಣ ಹೆಸರು ಮೋಹನ್ ಹಾದಿಕೆರೆ. ಹಾದಿಕೆರೆ ಎಲ್ಲಿ ಬರುತ್ತೆ ಅಂತ ನನಗೆ ಗೊತ್ತು ನಿಮಗೆ ಗೊತ್ತು ಆದರೆ ಗೊತ್ತಿಲ್ಲದೆ ಇರೊರಿಗೆ ಗೊತ್ತು ಮಾಡಬೇಕಲ್ಲಾ.....ನಮ್ಮೂರು ತರಿಕೆರೆ ಅನ್ನೊ  ಸಣ್ಣ ಪಟ್ಟಣದ ಪಕ್ಕ. ತರಿಕೆರೆ ಅಂದ ಕೂಡಲೆ ನಮ್ಮ ಅಪ್ಪಟ ಕನ್ನಡಿಗರಿಗೆ ಪಟ್ಟನೆ ಹೊಳೆಯೊದು ಎನೊ ಅಂತೀರಾ ..
ತರಿಕೆರೆ ಏರಿಮೇಲೆ ಮೂರು ಕರೀ ಕುರಿಮರಿಗಳು ಮೇಯ್ತಾ ಇದ್ವಂತೆ ಅಂತ. ಪಾಪ ಅದ್ಯಾವ ಪುಣ್ಯಾತ್ಮ ನೊಡಿದ್ನೊ ಕುರಿಗಳು ಮೇಯ್ತಾ ಇರೊದ್ನ ಅವನಿಗೆ ಒಂದು ನಮಸ್ಕಾರ.

ತರೀಕೆರೆ ಎಲ್ಲಿ ಬರತ್ತೆ ಅಂತ ನಮ್ಮ ಬಹಳ ಕರ್ನಾಟಕದ ಜನರಿಗೆ ಗೊತ್ತಿಲ್ಲ. ನಿಮಗೆ ಈಗ ಗೊತ್ತಾಗಿರಬೇಕು ನಾನು ಗೊತ್ತಿಲ್ಲದೆ ಇರೊದ್ನ ಗೊತ್ತು ಮಾಡೀನೆ ಮುಂದೆ ಹೊಗೋದು ಅಂತ. ಕಾಫಿಯ ನಾಡು ನಮ್ಮ ಚಿಕ್ಕಮಗಳೂ ರು ಜಿಲ್ಲೆಯಲ್ಲಿ.
ನಾನು ಹತ್ತನೇ ತರಗತಿ ತನಕ ಓದಿದ್ದು ನಮ್ಮೂರಲ್ಲೆ. ಅದೂ ಕನ್ನಡ ಮಾಧ್ಯಮದಲ್ಲಿ. ಯಾಕಪಾ ಇವನು ಇದನ್ನೇ ಲ್ಲಾ ಹೇಳುತ್ತಾ ಇದಾನೆ ಅಂತೀರಾ ...ನಾ ಏನೆನು ಬರೆದಿರೊದು ಬರೆಯಬೇಕು ಅಂದ್ಕೊಂಡಿರೊದು ನಾ ೧೦ ನೆ ತರಗತಿಯವರೆಗೆ ಕನ್ನಡದಲ್ಲೇ ಓದಿದ್ದೆ ಕಾರಣ ಅಂತ ಹೆಳೋಕೆ ಒಂತರಾ ಖುಷಿ ಮತ್ತು ಹೆಮ್ಮೆಯ ವಿಚಾರ.
ಮುಂದಿನ ಅಂಕಣದವರೆಗೆ ಕಾಯ್ತಿರಾ ....
ಕೇಳೊದೇನು ಕಾಯಲೇಬೇಕು ಯಾಕಂದರೆ ನಂಗೆ ನಿಮಗೆ ದಿನಕ್ಕೆ ಇರೋದು ೨೪ಗಂಟೆ. ಬರಿಯೊದೊಂದೆ ನನ್ನ ಕೆಲಸ ಅಲ್ವಲಾ ...ಸರಿ ...ಕಾಯ್ತಾ ಇರೀ.....

6 comments: